ರಾಗ : ಪೀಲು
ತಾಳ : ಆದಿತಾಳ
ಪುರಂದರದಾಸರ ಕೃತಿ
ಎಂಥ ಬಲವಂತನೋ ಕುಂತಿಯ ಸುಜಾತನೋ | ಪ |
ಭಾರತೀಗೆ ಕಾಂತನೋ ನಿತ್ಯ ಶ್ರೀಮಂತನೋ | ಅ ಪ |
ರಾಮಚಂದ್ರನ ಪ್ರಾಣನೋ ಅಸುರ ಹೃದಯ ಬಾಣನೋ
ಖಳರ ಗಂಟಲ ಗಾಣನೋ ಜಗದೊಳಗೆ ಪ್ರವೀಣನೋ | ೧ |
ಕುಂತಿಯ ಕಂದನೋ ಸೌಗಂಧಿಕವ ತಂದನೋ
ಕುರುಕ್ಷೇತ್ರಕೆ ಬಂದನೋ ಕೌರವರ ಕೊಂದನೋ | ೨ |
ಬಂಡಿ ಅನ್ನವನುಂಡನೋ ಬಕನ ಪ್ರಾಣವ ಕೊಂದನೋ
ಭೀಮ ಪ್ರಚಂಡನೋ ದ್ರೌಪದಿಗೆ ಗಂಡನೋ | ೩ |
ವೈಷ್ಣವಾಗ್ರಗಣ್ಯನೋ ಸಂಚಿತಾಗ್ರ ಪುಣ್ಯನೋ
ದೇವವರೇಣ್ಯನೋ ದೇವಶರಣ್ಯನೋ | ೪ |
ಮಧ್ವಶಾಸ್ತ್ರವ ರಚಿಸಿದನೊ ಸದ್ವೈಷ್ಣವರ
ಸಲಹಿದನೋ
ಉಡುಪಿ ಕೃಷ್ಣನ ನಿಲಿಸಿದನೋ ಪುರಂದರವಿಠಲನ
ಒಲಿಸಿದನೆ | ೫ |
No comments:
Post a Comment