ರಾಗ : ಕಾಂಬೋಧಿ
ತಾಳ : ಝಂಪೆತಾಳ
ಜಗನ್ನಾಥದಾಸರ ಕೃತಿ
ಭಾರತೀರಮಣ ಸದ್ಭಕ್ತ ಬಂಧೋ ಈ
ಘೋರ ಭವಭಯ ಪರಾಭವಗೈಸು ಬೇಗ | ಪ |
ಲೋಕಾಂತರಾತ್ಮಕನೆ ಈ ಕಮಲಜಾಂಡದೊಳು
ನಾ ಕಾಣೆ ನಿನ್ನುಳಿದು ಸಾಕುವವರ
ನೀ ಕೈಪಿಡಿದು ಕೃಪಾವಲೋಕನದಿ
ಭಕ್ತರಲಿ ಕರುಣವ ಮಾಡು ಮೈನಾಕಿವರಜನಕ | ೧ |
ಅನಿಲ ಎಮ್ಮ ಅವಗುಣವೆಣಿಸುವರೆ ಕಡೆಯುಂಟೆ
ಕೊನೆಗೆ ನೀನೆ ಗತಿಯೋ ಅನಿಮಿಶೇಷ
ಜನನಿ ಜನಕ ಭ್ರಾತ ಜನಪ ಗುರು ವರಮಿತ್ರ
ಎನಗೆ ನೀ ಸಕಲ ಸೌಖ್ಯದನೆಂದು ಪ್ರಾರ್ಥಿಸಿದೆ | ೨ |
ಹನುಮಭೀಮಾನಂದ ಮುನಿರಾಯ ನಿನ್ನ
ಪ್ರಾರ್ಥನೆ ಗೈಯುವರು ವಾಣಿ ಫಣಿಪ ಮೃಡರು
ಅನಿಮಿತ್ತ ಬಾಂಧವ ಜಗನ್ನಾಥ ವಿಠಲನ
ತನಯ ತಾಪಕರ ಬಂಧನ ಮೋಚನಮಾಡೋ | ೩ |
No comments:
Post a Comment