Friday, November 19, 2010

ಗೋವಿಂದ ನಾಮ

ಶ್ರೀ ಶ್ರೀನಿವಾಸ ಗೋವಿಂದ ಶ್ರೀ ವೆಂಕಟೇಶ ಗೋವಿಂದ
ಭಕ್ತವತ್ಸಲ ಗೋವಿಂದ ಭಾಗವತಪ್ರಿಯ ಗೋವಿಂದ
ನಿತ್ಯ ನಿರ್ಮಲ ಗೋವಿಂದ ನೀಲಮೇಘಶ್ಯಾಮ ಗೋವಿಂದ
ಪುರಾಣಪುರುಷ ಗೋವಿಂದ ಪುಂಡರಿಕಾಕ್ಷ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೧//

ನಂದನಂದನ ಗೋವಿಂದ ನವನೀತಚೋರ ಗೋವಿಂದ
ಪಶುಪಾಲಕ ಶ್ರೀ ಗೋವಿಂದ ಪಾಪವಿಮೋಚನ ಗೋವಿಂದ
ದುಷ್ಟಸಂಹಾರ ಗೋವಿಂದ ದುರಿತನಿವಾರಣ ಗೋವಿಂದ
ಶಿಷ್ಟಪರಿಪಾಲಕ ಗೋವಿಂದ ಕಷ್ಟನಿವಾರಣ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೨//

ವಜ್ರಮಕುಟಧರ ಗೋವಿಂದ ವರಾಹಮೂರ್ತಿವಿ ಗೋವಿಂದ
ಗೋಪಿಜನಲೋಲ ಗೋವಿಂದ ಗೋವರ್ಧನೋದ್ಧಾರ ಗೋವಿಂದ
ದಶರಥನಂದನ ಗೋವಿಂದ ದಶಮುಖಮರ್ಧನ ಗೋವಿಂದ
ಪಕ್ಷಿವಾಹನ ಗೋವಿಂದ ಪಾಂಡವಪ್ರಿಯ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೩//

ಮತ್ಸ್ಯಕೂರ್ಮ ಗೋವಿಂದ ಮಧುಸೂಧನಹರಿ ಗೋವಿಂದ
ವರಾಹನ್ರುಸಿಂಹ ಗೋವಿಂದ ವಾಮನಭ್ರುಗುರಾಮ ಗೋವಿಂದ
ಬಲರಾಮಾನುಜ ಗೋವಿಂದ ಗೋವಿಂದ ಬುದ್ಧಕಲ್ಕಿಧರ ಗೋವಿಂದ
ವೇಣುಗಾನಪ್ರಿಯ ಗೋವಿಂದ ವೆಂಕಟರಮಣ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೪//

ಸೀತಾನಾಯಕ ಗೋವಿಂದ ಶ್ರಿತಪಾಲಕ ಗೋವಿಂದ
ದರಿದ್ರಜನಪೋಷಕ ಗೋವಿಂದ ಧರ್ಮಸಂಸ್ಧಾಪನ ಗೋವಿಂದ
ಅನಾಥರಕ್ಷಕ ಗೋವಿಂದ ಆಪದ್ಭಾಂಧವ ಗೋವಿಂದ
ಶರಣಾಗತವತ್ಸಲ ಗೋವಿಂದ ಕರುಣಾಸಾಗರ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೫//

ಧರಣಿನಾಯಕ ಗೋವಿಂದ ದಿನಕರತೇಜ ಗೋವಿಂದ
ಪದ್ಮಾವತಿಪ್ರಿಯ ಗೋವಿಂದ ಪ್ರಸನ್ನ ಮೂರ್ತಿವಿ ಗೋವಿಂದ
ಅಭಯಹಸ್ತಪ್ರದರ್ಶನ ಗೋವಿಂದ ಅಕ್ಷಯವರದ ಗೋವಿಂದ
ಶಂಖಚಕ್ರಧರ ಗೋವಿಂದ ಶರಣಾಗದರ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೬//

ವಜ್ರತೀರ್ಥಗೋವಿಂದ ವಿರೋಧಿಮರ್ಧನ ಗೋವಿಂದ
ಸಾಲಗ್ರಾಮಧರ ಗೋವಿಂದ ಸಹಸ್ರನಾಮ ಗೋವಿಂದ
ಲಕ್ಷ್ಮೀವಲ್ಲಭ ಗೋವಿಂದ ಲಕ್ಷ್ಮಣಾಗ್ರಜ ಗೋವಿಂದ
ಕಸ್ತೂರಿತಿಲಕ ಗೋವಿಂದ ಕಾಂಚನಾಂಬರಧರ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೭//

ಗರುಡವಾಹನ ಗೋವಿಂದ ಗಜರಾಜರಕ್ಷಕ ಗೋವಿಂದ
ವಾನರಸೇವಿತಗೋವಿಂದ ವಾರಿಧಿಬಂಧನ ಗೋವಿಂದ
ಸಪ್ತಗಿರೀಷ ಗೋವಿಂದ ಏಕಸ್ವರೂಪ ಗೋವಿಂದ
ಶ್ರೀರಾಮಕ್ರಿಷ್ಣ ಗೋವಿಂದ ರಘುಕುಲನಂದನ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೮//

ವಜ್ರಕವಚಧರ ಗೋವಿಂದ ವೈಜಯಂತಿಮಾಲ ಗೋವಿಂದ
ರೈನವಿಮೋಚಕ ಗೋವಿಂದ ವಸುದೇವತನಯಗೋವಿಂದ
ಬಿಲ್ವಪತ್ರಾರ್ಚಿತ ಗೋವಿಂದ ಭಿಕ್ಷುಕಸಂಸ್ತುತ ಗೋವಿಂದ
ಸ್ತ್ರೀಪುಂರೂಪ ಗೋವಿಂದ ಶಿವಕೇಶವಮೂರ್ತಿ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೯//

ಪ್ರತ್ಯಕ್ಷರೂಪ ಗೋವಿಂದ ಪರಮದಯಾಕರ ಗೋವಿಂದ
ಬ್ರಹ್ಮಾಂಡರೂಪ ಗೋವಿಂದ ಭಕ್ತರಕ್ಷಕ ಗೋವಿಂದ
ನಿತ್ಯಕಲ್ಯಾಣ ಗೋವಿಂದ ನೀರಜನಾಭ ಗೋವಿಂದ
ಹತೀರಾಮಪ್ರಿಯ ಗೋವಿಂದ ಹರಿಸರ್ವೋತ್ತಮ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೧೦//

ಜನಾರ್ಧನಮೂರ್ತಿ ಗೋವಿಂದ ಜಗತ್ಸಾಕ್ಷಿ ಗೋವಿಂದ
ಅಭಿಷೇಕಪ್ರಿಯ ಗೋವಿಂದ ಆಪನ್ನಿವಾರಣ ಗೋವಿಂದ
ನಿತ್ಯಶುಭಪ್ರಿಯ ಗೋವಿಂದ ನಿಖಿಲ ಲೋಕೇಶ ಗೋವಿಂದ
ಆನಂದರೂಪ ಗೋವಿಂದ ಆದ್ಯಂತರಹಿತ ಗೋವಿಂದ
ಗೋವಿಂದ ಹರಿ ಗೋವಿಂದ ಗೋಕುಲನಂದನ ಗೋವಿಂದ//೧೧//

ಇಹಪರದಾಯಕ ಗೋವಿಂದ ಇಭರಾಜರಕ್ಷಕ ಗೋವಿಂದ
ಪರಮದಯಾಳು ಗೋವಿಂದ ಪದ್ಮನಾಭ ಗೋವಿಂದ
ತಿರುಮಲವಾಸ ಗೋವಿಂದ ತುಳಸಿವನಮಾಲ ಗೋವಿಂದ
ಶೇಷಾದ್ರಿನಿಲಯ ಗೋವಿಂದ ಶೇಷಸಾಯಿನಿ ಗೋವಿಂದ
ಶ್ರೀ ಶ್ರೀನಿವಾಸ ಗೋವಿಂದ ಶ್ರೀ ವೆಂಕಟೇಶ ಗೋವಿಂದ//೧೨//

Wednesday, November 3, 2010

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಗೋಕುಲನಂದನ ಶ್ರೀ ಕೃಷ್ಣನ ನೆನೆಯಿರೋ..

ದೇವಕಿಸುತನು ಶ್ರೀ ಕೃಷ್ಣನು..ಕಂಸನ ಕೊಂದವ ಶ್ರೀ ಕೃಷ್ಣನು..
ಬೆಣ್ಣೆಯ ಕದ್ದವ ಬಾಲಕೃಷ್ಣನು...ತಾಟಕಿಯ ಕೊಂದವ ಶ್ರೀ ಕೃಷ್ಣನು..
ಮಣ್ಣನು ನುಂಗಿ ಬ್ರಮ್ಹಾಂಡವ ತೋರಿದ ಬಾಲಕನಿವನು
ಕಲ್ಲು ಗುಂಡನು ಎಳೆದು ಮರಕ್ಕೆ ಶಾಪವಿಮೋಚನ ಮಾಡಿದ ಪುಟ್ಟ ಕಂದನಿವನು..
ಕಾಳಿಂಗ ಸರ್ಪವ ಮೆಟ್ಟಿನಿಂತ ಮುದ್ದು ಕಂದನಿವನು..
ಗೋವರ್ಧನ ಗಿರಿಧಾರಿ ಶ್ರೀ ಕೃಷ್ಣನು ಇವನು...

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಲೋಕೋದ್ಧಾರಕ ಶ್ರೀ ಕೃಷ್ಣನ ನೆನೆಯಿರೋ..

ಗೋವುಗಳ ಕಾಯ್ದ ಗೋಪಾಲಕನಿವನು..
ಗೋಪಿಕಾ ಸ್ತ್ರೀಯರ ಸೀರೆಯ ಕದ್ದವನಿವನು..
ದ್ರೌಪದಿಗೆ ಸಭೆಯಲ್ಲಿ ಸೀರೆಯ ಕೊಟ್ಟವನಿವನು...
ರುಕ್ಮಿಣಿ, ಸತ್ಯಭಾಮ, ಹದಿನಾರು ಸಾವಿರ ಗೋಪಿಕಾ ಸ್ತ್ರೀಯರ ಸಖನಿವನು..
ಪಿಳ್ಳಂಗೋವಿಯ ಹಿಡಿದು ಬೃಂದಾವನದಿ ನಲಿದಾಡಿದನಿವನು..

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ
ಜಗದೋದ್ಧಾರಕ ಶ್ರೀ ಕೃಷ್ಣನ ನೆನೆಯಿರೋ...

ಕುಚೇಲನ ಪ್ರಿಯ ಮಿತ್ರನು ಇವನು...ಶಿಶುಪಾಲಕನ ಸಂಹಾರಿಸಿದವನಿವನು..
ಅರ್ಜುನನ ರಥಸಾರಥಿಯಾಗಿ ಪಾರ್ಥಸಾರಥಿಯಾದವನಿವನು..
ವಿಶ್ವರೂಪ ತೋರಿ ಭಗವದ್ಗೀತೆಯ ಭೋಧಿಸಿದ ಶ್ರೀ ಕೃಷ್ಣನು
ಶಂಖ ಚಕ್ರ ಗಧಾಧಾರಿಯಾದ ಶ್ರೀಮನ್ನಾರಾಯಣನು..

ಕೃಷ್ಣನ ನೆನೆಯಿರೋ ಶ್ರೀ ಕೃಷ್ಣನ ನೆನೆಯಿರೋ