ರಾಗ : ನಾಟಿ
ತಾಳ : ಆದಿತಾಳ
ವಾದಿರಾಜರ ಕೃತಿ
ಎಣೆಯಾರೋ ನಿನಗೆ ಹನುಮಂತರಾಯ | ಪ |
ಎಣೆಯಾರೋ ನಿನಗೆ ತ್ರಿಭುವನದೊಳಗೆಲ್ಲ
ಪ್ರಣತಜನ ಮಂದಾರ ಪವನ ಸುಕುಮಾರ | ಅ ಪ |
ಅಡಿಗಡಿಗೆ ರಾಮಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತರಿಸಿದಂಥ ಹನುಮಂತ | ೧ |
ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ | ೨ |
ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ ಕಿತ್ತು
ಖಳಖಳನೆ ನಗುತ ದಶಕಂಧರನ ಗುದ್ದಿ ಬಂದೆ
ಭಳಿಭಳಿರೆ ಹಯವದನದಾಸ ನಿಸ್ಸೀಮ | ೩ |
No comments:
Post a Comment