Tuesday, October 8, 2013

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ರಾಗ : ಕಲ್ಯಾಣಿ
ತಾಳ : ಆಟತಾಳ
ಪುರಂದರದಾಸರ ಕೃತಿ

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ
ಭಯವು ಇನ್ಯಾತಕಯ್ಯ | |

ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ | ಅ ಪ |

ಕನಸಿಲಿ ಮನಸಿಲಿ ಕಳವಳವಾದರೆ
ಹನುಮನ ನೆನೆದರೆ ಹಾರಿಹೋಗದೆ ಭೀತಿ | |

ರೋಮ ರೋಮಕೆ ಕೋಟಿ ಲಿಂಗವುದರಿಸಿದ
ಭೀಮನ ನೆನೆದರೆ ಬಿಟ್ಟು ಹೋಗದೆ ಪಾಪ | |

ಪುರಂದರ ವಿಠಲನ ಪೂಜೆಯ ಮಾಡುವ
ಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ | |

No comments:

Post a Comment