Wednesday, October 16, 2013

ಕರವ ಮುಗಿದ ಮುಖ್ಯಪ್ರಾಣ ಕರವ ಮುಗಿದ

ರಾಗ : ಕಾಪಿ
ತಾಳ : ಛಾಪುತಾಳ
ಪುರಂದರದಾಸರ ಕೃತಿ

ಕರವ ಮುಗಿದ ಮುಖ್ಯಪ್ರಾಣ ಕರವ ಮುಗಿದ | |
ಕರವ ಮುಗಿದ ಶ್ರೀಹರಿಗೆ ಎದುರಾಗಿ

ದುರುಳರ ಸದೆದು ಶರಣರ ಪೊರೆಯೆಂದು | ಅ ಪ |
ಜೀವೇಶರೈಕ್ಯವು ಜಗತು ಮಿಥ್ಯಾ ಎಂದು

ಈ ವಿಧ ಪೇಳುವ ಮಾಯಿಗಳನಳಿಯೆಂದು | |
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎಂಬ

ಕ್ಷುಲ್ಲಕರನು ಹಿಡಿದು ಹಲ್ಲು ಮುರೀಯೆಂದು | |
ತಾರತಮ್ಯ ಪಂಚಭೇದ ಸತ್ಯವೆಂಬ

ಮಾರುತ ಮತ ಪೊಂದಿದವರ ನೀ ಕಾಯೆಂದು | |
ಪರಿಪರಿ ಜೀವರ ಹೃದಯದೊಳಗೆ ನಿಂತು

ನಿರುತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು | |
ಹರಿ ಮಾಡುವ ವ್ಯಾಪಾರ ಬಲ್ಲ ಕಾರಣನಾಗಿ

ಸಿರಿ ಪುರಂದರ ವಿಠಲನ ಚರಣಕ್ಕೆರಗಿ ನಿಂತು | |

No comments:

Post a Comment