Wednesday, October 23, 2013

ವೀರ ಹನುಮ ಬಹು ಪರಾಕ್ರಮ

ರಾಗ : ಆನಂದ ಭೈರವಿ
ತಾಳ : ಆಟತಾಳ
ಪುರಂದರ ದಾಸರ ಕೃತಿ

ವೀರ ಹನುಮ ಬಹು ಪರಾಕ್ರಮ | |

ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ | ಅ ಪ |

ರಾಮದೂತನೆನಿಸಿಕೊಂಡೆ ನೀ, ರಾಕ್ಷಸರ ಮನವೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು, ಜಗತಿಗೆಲ್ಲ ಹರುಷವಿತ್ತು
ಚೂಡಾಮಣಿಯ ರಾಮಗಿತ್ತು, ಲೋಕಕೆ ಮುದ್ದೆನಿಸಿ ಮೆರೆವ | |

ಗೋಪಿಸುತನ ಪಾದ ಪೂಜಿಸಿ, ಗದೆಯ ಧರಿಸಿ ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ, ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ, ಸಂಗ್ರಾಮಧೀರನಾಗಿ ಜಗದಿ | |

ಮಧ್ಯಗೇಹನಲ್ಲಿ ಜನಿಸಿ ನೀ, ಬಾಲ್ಯದಲಿ ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ, ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ, ಮುದ್ದು ಪುರಂದರವಿಠಲ ದಾಸ | |

No comments:

Post a Comment