Thursday, November 21, 2013

ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ

ರಾಗ : ಶಂಕರಾಭರಣ
ತಾಳ : ಅಟತಾಳ

ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ||
ನೋಡಿದ್ಯಾ ಹನುಮನಾರ್ಭಟವ, ಹಾಳು ಮಾಡಿದ ಕ್ಷಣದಲಿ ವನವಾ

ಆಹಾ | ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಗಳ
ಕೊಂಡಾಡುವ ನಿನ್ನಯ ಕೋಡಗನ್ಹರುಷವ || ಅ ಪ ||

ಮಾತೆ ನಿನ್ನಾಜ್ಞೆಯ ಕೊಂಡು
ಆರ ಭೀತಿ ಇಲ್ಲದೆ ಫಲವ ಉಂಡು
ದೈತ್ಯದೂತ ಬರಲು ಭಾರಿ ಹಿಂಡು || ಆಹಾ ||
ವಾತಜಾತ ಬಂದ ಪಾತಕಿಗಳನ್ನೆಲ್ಲ
ತಾ ತವಕದಿ ಕೊಂದು ಭೂತಳಕ್ಹಾಕಿದ || ||

ಸೊಕ್ಕಿರಾವಣನೆಂಬ ಗಂಡ
ಮಹಲಕುಮಿಯನ ಕರಕೊಂಡ, ರಾಮ
ರಕ್ಕಸಾಂತಕ ಆಕೆ ಗಂಡ, ಕಪಿ
ಗಿಕ್ಕಿರೆಂದು ಕಮದಂಡ || ಆಹಾ ||
ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿ
ಸಿಕ್ಕರೆ ಬಿಡೆನೆಂದು ದಿಕ್ಕುಪಾಲಾದ || ||

ಎಷ್ಟೇಳವನ ಪ್ರತಾಪ, ನೋಡು
ಸುಟ್ಟೆನೆಂಬ ಲಂಕಾದ್ವೀಪ, ಎಂಥಾ
ಘಟ್ಟಿಗ ನೋಡೆ ನಮ್ಮಪ್ಪ || ಆಹಾ ||
ಸೃಷ್ಟೀಶ ಕೇಶವ ವಿಠಲರಾಯನ
ಮುಟ್ಟಿ ಭಜಿಸಲಜ ಪಟ್ಟಾಳೇನೆಂದ್ಹೋದಾ || ||

No comments:

Post a Comment