Thursday, November 7, 2013

ಹನುಮನ ಮನೆಯವರು ನಾವೆಲ್ಲರೂ

ರಾಗ : ಬಿಲಹರಿ
ತಾಳ : ಆದಿತಾಳ
ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿ
ಹನುಮನ ಮನೆಯವರು ನಾವೆಲ್ಲರೂ

ಹನುಮನ ಮನೆಯವರು || ||
ಅನುಮಾನ ಪಡೆದಲೆ ಸ್ಥಳವ ಕೊಡಿರಿ ಎಮಗೆ || ಅ ಪ ||

ಊರ್ಧ್ವಪುಂಡ್ರವ ನೋಡಿ ಶ್ರದ್ಧೆಭಕುತಿ ನೋಡಿ
ಹೃದ್ಗತವಾದೆಮ್ಮ ತತ್ವಗಳನೆ ನೋಡಿ
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ || ||

ಸತ್ತ ಮಿಥ್ಯಗಳಿಗೆ ಅಂತರ ಬಲ್ಲೆವು
ಉತ್ತಮನೀಚರೆಂಬುವ ಭೇದ ಬಲ್ಲೆವು
ಸುತ್ತಲು ಕಂಡು ಕಾಣದೆ ಇಹ ಎಲ್ಲಕ್ಕೂ
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು || ||

ಹಲವು ಲೋಕಗಳುಂಟೆಂಬುದ ಬಲ್ಲೆವು
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು
ಅಲವ ಬೋಧರು ನಮ್ಮ ಕಳುಹಿದರಿಲ್ಲಿಗೆ
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ || ||

No comments:

Post a Comment