Monday, November 18, 2013

ಜನುಮ ಜನುಮದಲಿ ಎನಗಿರಲಿ

ರಾಗ : ಷಣ್ಮುಖಪ್ರಿಯ
ತಾಳ : ಆದಿತಾಳ

ಜನುಮ ಜನುಮದಲಿ ಎನಗಿರಲಿ
ಹನುಮ ಭೀಮ ಮಧ್ವ ಮುನಿಗಳ ಸೇವೆಯು || ||

ಮಾತರಿಶ್ವ ನೀ ಪ್ರೀತನಾಗಿ ಅಜ
ತಾತನು ಸುಲಭದಿ ಒಲಿಯುವನು
ಕೋತಿಯ ರೂಪದಿ ಭೂತಳದಲಿ ಬಲು
ಖ್ಯಾತಿ ಪಡೆದ ರಾಮದೂತರ ಸೇವೆಯು || ||

ಹರನ ಭಕುತ ಜರಾಸಂಧನ ಕಾಯುವ
ಹರಿದು ಮುರಿದು ಬಲು ಸುಲಭದಲಿ
ಹರಿಗಪರೋಕ್ಷದಿ ಅರ್ಪಣೆ ಮಾಡಿದೆ
ಕುರುಕುಲಪತಿ ಬಲಭೀಮರ ಸೇವೆಯು ||||

ಶುದ್ಧದ್ವಿಜಕುಲದಲಿ ಉದ್ಭವಿಸುತ
ಅನಿರುದ್ಧಗನುಮತವಾಗಿರುವ
ಸಿದ್ಧಾಂತದ ಪದ್ಧತಿಯನು ತೋರಿದ
ಮಧ್ವಮತದ ತತ್ವದಲಿ ಪ್ರಸನ್ನತೆ || ||

No comments:

Post a Comment