Sunday, November 10, 2013

ಹನುಮಾನ್ ಕೀ ಜೈ ಹನುಮಾನ್ ಕೀ ಜೈ

ರಾಗ : ಸಿಂಧುಭೈರವಿ
ತಾಳ : ಆದಿತಾಳ

ಹನುಮಾನ್ ಕೀ ಜೈ ಹನುಮಾನ್ ಕೀ ಜೈ
ಹನುಮಾನ್ ಕೀ ಜೈ ಜೈ ಹನುಮಾನ್ || ||

ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ || ಅ ಪ ||

ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ
ಭೇರಿಯ ಹೊಡೆದೆಯೋ ಹನುಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ||

ವೈಷ್ಣವ ತತ್ವಗಳನು ಬೋಧಿಸಿ
ಜಯಭೇರಿಯ ಹೊಡೆದೆಯೋ ಬಲ ಭೀಮ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ||

ಮೋಕ್ಷಕೆ ಒಳ್ಳೆಯ ಮಾರ್ಗವ ತೋರುವ
ಜಯಭೇರಿಯ ಹೊಡೆದೆಯೋ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ || ||

ಅಂದಿನ ನಾದವು ಇಂದು ನುಡಿಯುತಿರೆ
ಮಂದಿಗಳೆಲ್ಲರು ಕೇಳುವರು
ತಂದೆ ಪ್ರಸನ್ನನ ಮಂದಿರದಲಿ ಇದು
ಎಂದೆಂದಿಗೂ ಶಾಶ್ವತವಿರಲಿ || ||

No comments:

Post a Comment