ರಾಗ : ಮೋಹನ
ತಾಳ : ಮಿಶ್ರಛಾಪುತಾಳ
ಶ್ರೀ ವಾದಿರಾಜರ ಕೃತಿ
ಈತನೇ ಕಾಣಿರೋ ಮಧ್ವಮುನಿ || ಪ ||
ಪರಿಪರಿ ಶೃತಿಗಳೆಂಬ ಗುಹೆಗಳಲ್ಲಿ
ಕೇಸರಿಯಂತೆ ಚರಿಸುತ್ತ
ಹರಿಯೇ ಸರ್ವೋತ್ತಮನೆಂಬ ಘೋಷಗಳಿಂದ
ದುರುಳವಾದಿಗಳೆಂಬ ನರಿಗಳೋಡಿಸಿದಾತ || ೧ ||
ಸಕಲಾಗಮಗಳೆಂಬ ಶರಧಿಯೊಳಗೆ
ಮುಕುತಿಯಲಿ ಮಥಿಸಿ
ಅಕಳಂಕ ಶ್ರೀಹರಿಯೆಂಬ ರತ್ನವ ಕಂಡು
ಮುಕುಟದೊಳಗಿಟ್ಟು ಲೋಕದಿ ಮೆರೆದಾತ || ೨ ||
ವೇದಸಾರನೆಂಬ ಈಶತತ್ವವಾದ
ಸುಧೆಯ ಕಲ್ಪಿಸಿಕೊಂಡು
ಆದಿಮೂರುತಿ ಶ್ರೀ ಹಯವದನ ದಿವ್ಯ
ಪಾದಸೇವಕನಾದ ಮಧ್ವಮುನಿಯೆ೦ಬಾತ || ೩ ||
No comments:
Post a Comment