ರಾಗ : ಸಾವೇರಿ
ತಾಳ : ಛಾಪತಾಳ
ವಾದಿರಾಜರ ಕೃತಿ
ಹನುಮಂತ ನೀ ಬಲು ಜಯವಂತನಯ್ಯಾ || ಪ ||
ಅನುಮಾನವಿಲ್ಲದಾನಂದತೀರ್ಥಾಚಾರ್ಯ || ಅ ಪ ||
ರಾಮಸೇವಕನಾಗಿ ರಾವಣನ ಪುರವ ನೀ
ಧೂರ್ಮ ಮಾಡಿದ್ಯೋನಿಂದು ನಿಮಿಷದೊಳಗೆ
ಭೂಮಿ ಪುತ್ರಿಗೆ ಮುದ್ರೆ ಉಂಗುರವನಿತ್ತು ನೀ
ಪ್ರೇಮ ಕುಶಲವ ರಾಮಪಾದಕರ್ಪಿಸಿದೆ || ೧ ||
ಕೃಷ್ಣಾವತಾರದಲಿ ಭೀಮನಾಗ್ಯವತರಿಸಿ
ದುಷ್ಟ ದೈತ್ಯರನೆಲ್ಲ ಸಂಹರಿಸಿದೆ
ದೃಷ್ಟಿಹೀನನಾದ ಧೃತರಾಷ್ಟ್ರನ್ವಂಶವ ನೀ
ಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಗರ್ಪಿಸಿದೆ || ೨ ||
ಪತಿತಸಂಕರ ಪುಟ್ಟಿ ಮತವೆಲ್ಲ ಕೆಡಿಸಲು
ಮತಿಹೀನರಾಗೆ ಸಜ್ಜನಗಳೆಲ್ಲ
ಅತಿವೆಗದಲಿ ಮಧ್ವಯತಿಯಾಗಿ ಅವತರಿಸಿ
ಗತಿಯ ತೋರಿಸಿದೆ ಹಯವದನ ನಿಜದಾಸಾ || ೩ ||
No comments:
Post a Comment