ರಾಗ : ಕಾಂಬೋಧಿ
ತಾಳ : ಆಟತಾಳ
ಮಧ್ವರಾಯ ಕರುಣೆ ಪಡೆಯದವ
ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು || ಪ ||
ಮಧ್ವಮತವೆ ಮತವು ಸಕಲ ಶ್ರುತಿ ಸಮ್ಮತವು
ಮಧ್ವರಾಯರ ಧ್ಯಾನ ಅಮೃತಪಾನ |
ಮಧ್ವರಾಯರ ಲೀಲೆ ನವರತುನದಾಮಾಲೆ
ಮಧ್ವರಾಯರ ಸ್ಮರಣೆ ಕುಲಕೋಟಿ ಉದ್ಧರಣೆ || ೧ ||
ಮಧ್ವರಾಯರ ಕಥೆ ಕೇಳಲದು ದುರಿತ ಹತ
ಮಧ್ವರಾಯರ ಭಕುತಿ ಮಾಡೇ ಮುಕುತಿ |
ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ
ಮಧ್ವರಾಯರ ಭಜನೆ ದುಷ್ಕರ್ಮತ್ಯಜನೆ || ೨ ||
ಮಧ್ವರಾಯರ ದಾಸನಾದವನೆ ನಿರ್ದೋಷ
ಮಧ್ವರಾಯರ ಬಂಟ ಜಗಕೆ ನೆಂಟ |
ಮಧ್ವರಮಣ ನಮ್ಮ ವಿಜಯ ವಿಠಲನಾದ
ಮಧ್ವೇಶನಾ ಕರುಣ ಪಡೆದವನೇ ಧನ್ಯ || ೩ ||
No comments:
Post a Comment