ರಾಗ : ಕಲ್ಯಾಣಿ
ತಾಳ : ಆಟತಾಳ
ಗುರುರಾಯರ ನಂಬಿರೋ ಮಾರುತಿಯೆಂಬ ಗುರುರಾಯರ
ನಂಬಿರೋ | ಪ |
ಗುರುರಾಯರ ನಂಬಿ ಬಿಡದೆ ಯಾವಾಗಲೂ
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ | ಅ ಪ |
ವನಧಿಯ ಮನೋವೇಗದಿ ಲಂಘಿಸಿ ಮಹೀ
ತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಇದಿರಾದ
ದನುಜರ ಬಡೆದು ಲಂಕೆಯ ತನ್ನ ಸಖಗಿತ್ತ | ೧ |
ಕೌರವ,ಬಕ , ಹಿಡಿಂಬ ಕೀಚಕರೆಂಬ
ದುರಳ ಸಂತತಿ ನೆಗ್ಗೊತ್ತಿ
ಘೋರ ಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ | ೨ |
ಜೀವೇಶ ಒಂದೇ ಎಂಬ
ದುರ್ವಾದಿಯ ಭಾವಶಾಸ್ತ್ರವ ಮುರಿದು
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರ ವಿಠಲ ಸೇವಕರಾದ | ೩ |
No comments:
Post a Comment