ರಾಗ : ಕಲ್ಯಾಣಿ
ತಾಳ : ಆದಿತಾಳ
ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲ ಗಾನಾ
ಹಿಡಿದ್ಯೋ ರಾಮನ ಚರಣ ನೀ ಹೌದೌದೋ ಮುಖ್ಯಪ್ರಾಣ || ಪ ||
ಸಂಜೀವನ ಪರ್ವತವ ನೀ ಅಂಜದೆ ತಂದ್ಯೋ ದೇವ
ಅಂಜನೆ ಸುತ ಸದಾಕಾವ ಹೃತ್ ಕಂಜವಾಸ ಸರ್ವಜೀವ || ೧ ||
ಏಕಾದಶರ ರುದ್ರ ನೀ ವೈದ್ಯೋರಾಮರ ಮುದ್ರ
ಸಕಲ ವಿದ್ಯಾಸಮುದ್ರ ನೀ ಹೌದೌದು ಬಲಭದ್ರ || ೨ ||
ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು
ಯಂತ್ರೋದ್ಧಾರಕನೆಂದು ಪುರಂದರ ವಿಠಲ ಸಲಹೆಂದು || ೩ ||
No comments:
Post a Comment