ರಾಗ : ಮಧ್ಯಮತಿ
ತಾಳ : ಆಟತಾಳ
ಪ್ರಾಣನಾಥನ ನೋಡುವ ಬನ್ನಿ| ಹರಿ ದಾಸರೆಲ್ಲ ||
ಬೇಡಿದ ಮುಕ್ತಿಯ ನೀಡುವ ನಾಡೋಳು|
ನೋಡುವ ಜನರ ಕಾಡುವ ನಮ್ಮ ದೊರೆ || ೧ ||
ಇಂದಿರೆ ಅರಸನ ಚರಣ ದ್ವಂದ್ವವ ಹೊಂದಿ
ಮಂದರಧರ ಮಧುಸೂದನ ಭಕ್ತನ || ೨ ||
ಹರಿಹರ ಕರಿವರದ ಪರಾತ್ಪರಾ
ಪುರುಷನ ಭಕ್ತನ ಪರಿಪಾಲನಮ್ಮ || ೩ ||
ಶ್ರೀದ ಹನುಮ ಭೀಮ ಮಧ್ವಾಂತರ್ಗತ
ರಾಮಕೃಷ್ಣ ವೇದವ್ಯಾಸಾರ್ಪಿತವೆಂದು || ೪ ||
ಸೃಷ್ಟಿಯೊಳಗೆ ಬಂದು ಮುಕ್ತ ಪುರಾನಿಂದು
ದುಷ್ಟ ದೈತ್ಯರ ಕೊಂದು ವೆಂಕಟವಿಠಲನ ದಾಸನೆಂದು || ೫ ||
No comments:
Post a Comment