ರಾಗ : ಮೋಹನ
ತಾಳ : ಆದಿತಾಳ
ಗುರು ಗೋವಿಂದದಾಸರ ಕೃತಿ
ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ | ಪ |
ಪಂಚ ರೂಪದಿ ಪ್ರಾಪಂಚ ವ್ಯಾಪ್ತ ಬಾರೋ
ಹಂಚಿಕೇಲಿ ದೈತ್ಯೆಯರ ವಂಚಕನೆ ಬಾರೋ | ೧ |
ಪಾಯುಪಸ್ತಕರ್ಮ ಗೈವಾಪಾನ ಬಾರೋ
ವಾಯುವ ನೀ ನಿರೋಧಿಸೆ ಕಾಯ್ವರಾರೋ | ೨ |
ಗೋಣುಮುರಿವ ಭಾರಹೊರೆವ ವ್ಯಾನ ಬಾರೋ
ಪ್ರಾಣಪಂಚ ವ್ಯೂಹ ಮುಖ್ಯವ್ಯಾನ ಬಾರೋ | ೩ |
ಉದಕ ಅನ್ನಕ್ಕವಕಾಶುದಾನ ಬಾರೋ
ಮುದದಿ ಶ್ವಾಸಮಂತ್ರ ಜಪ ಜಾಣ ಬಾರೋ | ೪ |
ವೈದಿಕ ಲೌಕಿಕ ಶಬ್ದ ನುಡಿಸೇ ಬಾರೋ
ಊರ್ಧ್ವಗತಿ ದಾತನೆ ಉದಾನ ಬಾರೋ | ೫ |
ಪಾನ ಅನ್ನಗಳ್ಹಂಚೆ ಸಮಾನ ಬಾರೋ
ಧ್ಯಾನವಿಂತು ಈವ ಮುಖ್ಯಪ್ರಾಣ ಬಾರೋ | ೬ |
ಕರುಣಾಸಾಗರ ದೇಹ ವೀಣೆ ಚರಿಸೆ ಬಾರೋ
ಗುರುಗೋವಿಂದವಿಠಲಾಧೀಷ್ಠಿತ ಗುರುವೇ ಬಾರೋ | ೭ |
No comments:
Post a Comment