ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ//
ಕುಂದಾಣಮಯವಾದ ಚಂದದ ತೊಟ್ಟಿಲದೊಳ್ ಅಂದಾದಿ ಮಲಗ್ಯಾರ ತೂಗಿರೆ
ನಂದಾನಕಂದ ಗೋವಿಂದ ಮುಕುಂದಾನಂದದಿ ಭಜಿಪರ ತೂಗಿರೆ//
ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ
ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನನ್ನ ತೂಗಿರೆ//
ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ//
ಅದ್ವೈತ ಮತವನ್ನು ವಿಧ್ವಂಸ ಮಾಡಿದ ಮಧ್ವ ಮತೋದ್ಧಾರನ ತೂಗಿರೆ
ಸಿದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರ ಮಾಳ್ಪರ ತೂಗಿರೆ//
ಭಜಕಜನರ ಭವ ತೃಜನಮಾಡಿಸಿ ಅವರ ನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ//

No comments:
Post a Comment