ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ//
ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂತ
ಮುದ್ದು ಮಂಗಳ ಗೌರಿಗೆ//
ಎರೆಡು ಪೀತಾಂಬರವನ್ನುಡಿಸಿ
ಸರ್ವಾಭರಣ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ//
ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಎನುತ
ಜಗದೊಡೆಯನ ಮಡದಿಗೆ//
ಹುಟ್ಟುಬಡವೆಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮಾರನ ತೋರಿದಂತ
ಶುಕ್ರವಾರದ ಲಕ್ಷ್ಮಿಗೆ//
No comments:
Post a Comment