Wednesday, February 13, 2013

ಶರಣು ಸಿದ್ಧಿ ವಿನಾಯಕ

ಶರಣು ಸಿದ್ಧಿ ವಿನಾಯಕ ಶರಣು ವಿದ್ಯ ಪ್ರದಾಯಕ

ಶರಣು ಪಾರ್ವತಿತನಯ ಮೂರುತಿ ಶರಣು ಮೂಷಕವಾಹನ//


ನಿಟಿಲ ನೇತ್ರನೆ ವರದ ಪುತ್ರನೆ ನಾಗಭೂಷಣ ಪ್ರಿಯನೆ

ಕಟಕಟಾ೦ಗದ ಕೋಮಲಾಂಗನೆ ಕರ್ಣ ಕುಂಡಲಧಾರನೆ//


ಬಟ್ಟ ಮುತ್ತಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ

ಇಟ್ಟ ತೊಡುಗೆಯ ಹೇಮಕಂಕಣ ಪಾಶಾಂಕುಶ ಧಾರನೆ//


ಕುಕ್ಷಿ ಮಹಾಲಂಬೋದರನೆ ನೀ ಇಕ್ಷುಚಾಪನ ಗೆಲಿದನೆ

ಪಕ್ಷಿವಾಹನ ಸಿರಿ ಪುರಂದರ ವಿಠಲನೆ ನಿಜದಾಸನೆ//

No comments:

Post a Comment