ಲೋಕಭರಿತನೋ ರಂಗ ಅನೇಕಚರಿತನೋ
ಕಾಕುಜನರ ಮುರಿದು ತನ್ನ ಏಕಾಂತಭಕ್ತರ ಪೊರೆವ ಕೃಷ್ಣ//
ರಾಜಸೂಯಯಾಗದಲ್ಲಿ ರಾಜರಾಜರಿರಲು ಧರ್ಮ
ರಾಜಸೂಯತನುಯೀತನೆ ಸಭಾಪೂಜ್ಯನೆಂದು ಮನ್ನಿಸಿದಾಗ//
ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ//
ಜ್ಞಾನಶೂನ್ಯನಾಗಿ ಸೊಕ್ಕಿ ತಾನೇ ವಾಸುದೇವನೆನಲು
ಹೀನ ಪೌ೦ಡ್ರಕನ ಶಿರವ ಜಾಣರಾಯ ತರಿದನಾಗ//
ಉತ್ತರೆಯ ಗರ್ಭದಲ್ಲಿ ಸುತ್ತಿಮುತ್ತಿದಸ್ತ್ರವನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ//
ತನ್ನ ಸೇವಕಜನರಿಗೊಲಿದು ಅನಂತ ಉಡುಪಿಯಲಿ ನಿಂತು
ಘನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ//

No comments:
Post a Comment