ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ರಥವನೇರಿದ
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು//
ಚತುರ ದಿಕ್ಕು ದಿಕ್ಕುಗಳಲ್ಲಿ ಅರಿಪ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಪೇಳದೆ ಸರ್ವಥಾ ಬಿಡೆನೆಂದು//
ಅತುಲಮಹಿಮಾ ನೀಯಾ ದಿನದಲಿ ದಿತಿಜ ವಂಶದಲಿ
ಉತಪತ್ತಿಯಾಗಿ ಉಚಿತದಲಿ ಉತ್ತಮಮತಿಯಲ್ಲಿ
ಅತಿಶಯವಿರದೆ ಪಿತನಬಾಧೆಗೆ
ಮನ್ಮಥಪಿತನೊಲಿಸಿದೆ ಜಿತಕರಣದಲಿ//
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ
ಪ್ರತಿವಾದಿ ಕದಳಿವನ ಕರಿಯೇ ಕರಮುಗಿವೆನು ದೊರೆಯೇ
ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ//
ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು//
ಚತುರ ದಿಕ್ಕು ದಿಕ್ಕುಗಳಲ್ಲಿ ಅರಿಪ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಪೇಳದೆ ಸರ್ವಥಾ ಬಿಡೆನೆಂದು//
ಅತುಲಮಹಿಮಾ ನೀಯಾ ದಿನದಲಿ ದಿತಿಜ ವಂಶದಲಿ
ಉತಪತ್ತಿಯಾಗಿ ಉಚಿತದಲಿ ಉತ್ತಮಮತಿಯಲ್ಲಿ
ಅತಿಶಯವಿರದೆ ಪಿತನಬಾಧೆಗೆ
ಮನ್ಮಥಪಿತನೊಲಿಸಿದೆ ಜಿತಕರಣದಲಿ//
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ
ಪ್ರತಿವಾದಿ ಕದಳಿವನ ಕರಿಯೇ ಕರಮುಗಿವೆನು ದೊರೆಯೇ
ಕ್ಷಿತಿಯೊಳು ಗೋಪಾಲ ವಿಠಲನ ಸ್ಮರಿಸುತ
ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ//
No comments:
Post a Comment