Friday, February 22, 2013

ಜೋ ಜೋ ಶ್ರೀ ಕೃಷ್ಣ ಪರಮಾನಂದ

ಜೋ ಜೋ ಶ್ರೀ ಕೃಷ್ಣ ಪರಮಾನಂದ

ಜೋ ಜೋ ಗೋಪಿಯ ಕಂಡ ಮುಕುಂದ ಜೋ ಜೋ //



ಪಾಲಗಡಲೊಡಳೊಳು ಪವಡಿಸಿದವನೆ

ಆಲದೆಲೆಯ ಮೇಲೆ ಮಲಗಿದ ಶಿಶುವೆ

ಶ್ರೀ ಲತಾಂಗಿಯಳ ಚಿತ್ತದೊಲ್ಲಭನೆ

ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ//



ಹೊಳೆವಂತ ರನ್ನದ ತೊಟ್ಟಿಲ ಮೇಲೆ

ಥಳಥಳಿಸುವ ಗುಲಗಂಜಿಯ ಮಾಲೆ

ಅಳದೆ ನೀ ಪಿಡಿದಾಡೆನಯ ಮುದ್ದುಬಾಲ

ನಳಿನನಾಭನೆ ನಿನ ಪಾಡಿ ತೂಗುವೆನು ಜೋ ಜೋ//



ಯಾರ ಕಂದ ನೀನಾರ ನಿಧಾನಿ

ಯಾರ ರತ್ನವೋ ನೀನಾರ ಮಾಣಿಕ್ಯವೋ

ಸೇರಿತು ಎನಗೊಂದು ಚಿಂತಾಮಣಿಯಂದು

ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ//



ಗುಣನಿಧಿಯೇ ನಿನ್ನನೆತ್ತಿಕೊಂಡಿದ್ದರೆ

ಮನೆಯ ಕೆಲಸವಾರು ಮಾಡುವರಯ್ಯ

ಮನಕೆ ಸುಖಾನಿದ್ರೆಯ ತಂದುಕೋ ಬೇಗ

ಫಣಿಶಯನನೆ ನಿನ್ನ ಪಾಡಿ ತೂಗುವೆನಯ್ಯ ಜೋ ಜೋ//



ಅಂಡಜವಾಹನ ಅನಂತಮಹಿಮ

ಪುಂಡರೀಕಾಕ್ಷ ಶ್ರೀ ಪರಮಪಾವನ

ಹಿಂಡು ದೈವದ ಗಂಡ ಉದ್ದಂಡನೆ

ಪಾಂಡುರಂಗ ಶ್ರೀ ಪುರಂದರ ವಿಠಲನೆ ಜೋ ಜೋ//

No comments:

Post a Comment