ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ಕೃಷ್ಣ ನೀ ಬಾರಯ್ಯ//
ಮನ್ಮಥ ಜನಕನೆ ಬೇಗನೆ ಬಾರೋ ಕಮಲಾಪತಿ ನೀ ಬಾರೋ
ಅಮಿತ ಪರಾಕ್ರಮ ಶಂಕರ ಬಾರೋ ಗಮನೀಯ ಗಾತ್ರನೆ ಬಾರಯ್ಯ ದೊರೆಯೇ//
ಸುರುಳು ಕೇಶಗಳ ಒಲಿವ ಅಂದ ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲು ಕಂಗಳಿಂದ ಥರ ಥರದಾಭರಣ ಧರಿಸಿ ನೀ ಬಾರೋ//
ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ ಮೇಲಾಗಿ ಭಕ್ಷ್ಯವ ಬಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೇ ಬಾ ನನ್ನ ತಂದೆ ಪುರಂದರ ವಿಠಲ//

No comments:
Post a Comment