ರಾಯ ಬಾರೋ ತಂದೆ ತಾಯಿ ಬಾರೋ ನಮ್ಮನು ಕಾಯ ಬಾರೋ
ಮಾಯಿಗಳ ಮರ್ಧಿಸಿದ ರಾಘವೇಂದ್ರ ರಾಯ ಬಾರೋ//
ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟವ ಸಲಿಸುತಿರ್ಪೆರಾಯ ಬಾರೋ
ಕುಂದದಭೀಷ್ಟವ ಸಲಿಸುತಿರ್ಪೆ ಸರ್ವಜ್ಞ
ಮಂದನ ಮಾತಿಗೆ ರಾಘವೇಂದ್ರ, ರಾಯ ಬಾರೋ//
ಆರ್ಮೂರು ಏಳು ನಾಲ್ಕೆಂಟು ಗ್ರಂಥ ಸಾರಾರ್ಥ
ತೋರಿದ ಸರ್ವರಿಗೆ ನ್ಯಾಯದಿಂದ ರಾಯ ಬಾರೋ
ತೋರಿದ ಸರ್ವರಿಗೆ ನ್ಯಾಯದಿಂದ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ, ರಾಯ ಬಾರೋ//
ರಾಮಪದಾಬ್ಜ ಸತತ ಭೃಂಗ ಕೃಪಾಂಗ
ಭ್ರಾಮಕ ಜನರ ಮಾನಭಂಗ ರಾಯ ಬಾರೋ
ಭ್ರಾಮಕ ಜನರ ಮಾನಭಂಗ ಮಾಡಿದ
ಧೀಮಂತರೊಡೆಯ ರಾಘವೇಂದ್ರ, ರಾಯ ಬಾರೋ//
ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀಂದ್ರಾರ್ಯರ ವರಪುತ್ರಾ ರಾಯ ಬಾರೋ
ಶ್ರೀ ಸುಧೀಂದ್ರಾರ್ಯರ ವರಪುತ್ರಾನೆನಿಸಿದೆ
ದೈಷಿಕರೊಡೆಯ ರಾಘವೇಂದ್ರ, ರಾಯ ಬಾರೋ//
ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದ ಮಹಿಷಿಯ ರಾಯ ಬಾರೋ
ಪ್ರೇತತ್ವ ಕಳೆದ ಮಹಿಷಿಯ ಮಹ ಮಹಿಮ
ಜಗನ್ನಾಥ ವಿಠಲನ ಪ್ರೀತಿ ಪಾತ್ರಾ, ರಾಯ ಬಾರೋ//
No comments:
Post a Comment