Thursday, February 7, 2013

ಶ್ರೀನಿವಾಸ ಭಜನೆ

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ

ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ

ನಿನ್ನ ನುಡಿಯ ಜೊತೆಲ್ಲೋ ಶ್ರೀನಿವಾಸ

ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ//



ಬಡಿಯೋ ಬೆನ್ನಲ್ಲಿ ಶ್ರೀನಿವಾಸ

ಎನ್ನ ಒಡಲ ಹೊಯ್ಯದಿರೋ ಶ್ರೀನಿವಾಸ

ನಾ ಬಡವ ಕಾಣೆಲೋ ಶ್ರೀನಿವಾಸ

ನಿನ ಒಡಲ ಹೊಕ್ಕೆನೋ ಶ್ರೀನಿವಾಸ//



ಪಂಜು ಹಿಡಿವೆನೋ ಶ್ರೀನಿವಾಸ

ನಿನ ಎಂಜಲ ಬಳಿದುಂಬೆ ಶ್ರೀನಿವಾಸ

ನಾ ಸಂಜೆ ಉದಯಕೆ ಶ್ರೀನಿವಾಸ

ಕಾಳಜಿಯ ಪಿಡಿವೆ ಶ್ರೀನಿವಾಸ//

ಸತಿಗೆ ಚಾಮರ ಶ್ರೀನಿವಾಸ

ನಾನೆತ್ತಿ ಕುಣಿವೆನೋ ಶ್ರೀನಿವಾಸ

ನಿನ್ನ ರತ್ನದಾವಿಗೆ ಶ್ರೀನಿವಾಸ

ನಾ ಹೊತ್ತು ನಲಿವೆನೋ ಶ್ರೀನಿವಾಸ//



ಅವರೊಳಿಗವ ಮಾಳ್ಪೆ ಶ್ರೀನಿವಾಸ

ನನ್ನ ಪಾಲಿಸೋ ಬಿಡದೆ ಶ್ರೀನಿವಾಸ

ಹೇಳಿದಂತಾಗಲಿ ಶ್ರೀನಿವಾಸ

ನಿನ್ನಗಳಾಗಿವೆ ಶ್ರೀನಿವಾಸ//



ನಿನ್ನ ನಾಮ ಹೋಳಿಗೆ ಶ್ರೀನಿವಾಸ

ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ

ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸ

ನನಗಿನ್ನು ಲಜ್ಜೆತಕೆ ಶ್ರೀನಿವಾಸ//



ಬೀಸಿ ಕೊಲ್ಲಲವರೆ ಶ್ರೀನಿವಾಸ

ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ

ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸ

ಎಂಜಲ ಬಂಟ ನಾ ಶ್ರೀನಿವಾಸ//



ಹೇಸಿ ನಾನಾದರೆ ಶ್ರೀನಿವಾಸ

ಹರಿ ದಾಸರೊಳು ಪೊಕ್ಕೆ ಶ್ರೀನಿವಾಸ

ಅವರ ಭಾಷೆಯ ಕೇಳಿಹೆ ಶ್ರೀನಿವಾಸ

ಆ ವಾಸಿಯ ಸೈರಿಸೋ ಶ್ರೀನಿವಾಸ//



ತಿಂಗಳವನಲ್ಲ ಶ್ರೀನಿವಾಸ

ವತ್ಸ ರಂಗಳವನಲ್ಲ ಶ್ರೀನಿವಾಸ

ರಾಜಂಗಳ ಸವದಿಪೆ ಶ್ರೀನಿವಾಸ

ಭವನಗಳ ದಾಟುವೆ ಶ್ರೀನಿವಾಸ//



ನಿನ್ನವ ನಿನ್ನವ ಶ್ರೀನಿವಾಸ

ನಾನನ್ಯ ಅರಿಯೆನೋ ಶ್ರೀನಿವಾಸ

ಅಯ್ಯ ಮನ್ನಿಸೋ ತಾಯಿತಂದೆ ಶ್ರೀನಿವಾಸ

ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ/

No comments:

Post a Comment