Thursday, February 21, 2013

ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ, ಗೋವಿಂದನ


ಪುಂಡರೀಕಾಕ್ಷ ಪಾಂಡವ ಪಕ್ಷ ಶ್ರೀಕ್ರಷ್ಣನ

ಕಂಡೆ ನಾ ಗೋವಿಂದನ


ಪುರುಷೋತ್ತಮ ನರಹರಿ ಶ್ರೀಕ್ರಷ್ಣನ

ಶರಣಾಗತ ಜನ ರಕ್ಷಕನ

ಸಾಸಿರ ನಾಮನ ಶ್ರೀಹ್ರಷಿಕೇಶನ (೨)

ಶೇಷಶಯನ ನಮ್ಮ ವಸುದೇವ ಸುತನ


ಕೇಶವ ನಾರಯಣ ಶ್ರೀಕ್ರಷ್ಣನ

ವಾಸುದೆವ ಅಚ್ಯುತ ಅನಂತನ

ಕರುಣಾಕರ ನಮ್ಮ ಪುರಂದರ ವಿಠಲನ (೨)

ನೆರೆ ನಂಬಿದೆ ಬೇಲೂರ ಚೆನ್ನಿಗನ



No comments:

Post a Comment