Sunday, February 17, 2013

ಪವಮಾನ ಪವಮಾನ ಜಗದ ಪ್ರಾಣ

ಪವಮಾನ ಪವಮಾನ ಜಗದ ಪ್ರಾಣ


ಸಂಕರುಷಣ ಭವ ಭಯಾ ರಣ್ಯದಹನಾ

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನಪ್ರಿಯ//



ಹೇಮಕಚ್ಚೂಟ ಉಪವೀತ ಧರಿತ ಮಾರುತ

ಕಾಮಾದಿವರ್ಗರಹಿತ ವ್ಯೋಮಾದಿ ಸಕಲವ್ಯಾವೃತ ನಿರ್ಭೀತ

ರಾಮಚಂದ್ರನ ನಿಜದೂತ ಯಾಮ ಯಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ

ತೋರುತ ಪಾಮರ ಮತಿಯನು ನೀ ಮಾಣಿಪುದೋ//



ವಜ್ರಶರೀರ ಗಂಭೀರ ಮುಕುಟಧರ ದುರ್ಜನವನಕುಟಾರ

ನಿರ್ಜರಮಣಿ ದಯಾಪರಾವರ ಉದಾರ ಸಜ್ಜನರಘ ಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ

ಘರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪಾದದೊಳಿ ಮೂರ್ಜಗದಲಿ ಭವವರ್ಜಿತ ನೆನಿಸೋ//



ಪ್ರಾಣಪಾನ ವ್ಯಾನ ಉದಾನ ಸಮಾನ ಆನಂದ ಭಾರತಿ ರಮಣ

ನೀನೆ ಶರ್ವಾದಿ ಗೀರ್ವಾಣಾದ್ಯರಿಗೆ ಜ್ಞಾನಧನ ಪಾಲಿಸಿ ವರೇಣ್ಯ

ನಾನು ನಿರುತದಲಿ ಏನೇನೆಸಗುವೆ ಮಾನಸಾದಿ ಕರ್ಮ

ನಿನಗೊಪ್ಪಿಸಿದೆನೋ ಪ್ರಾಣನಾಥ ಸಿರಿವಿಜಯವಿಠಲನ

ಕಾಣಿಸಿಕೊಡುವುದು ಭಾನು ಪ್ರಕಾಶ//

No comments:

Post a Comment