Wednesday, March 27, 2013

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ

ಎಲ್ಲರನು ಸಲಹುವನು ಇದಕೆ ಸಂಶಯ ಬೇಡ//

ಬೆಟ್ಟದ ತುದಿಯಲ್ಲಿ ಬೆಳದ ವೃಕ್ಷಗಳಿಗೆ

ಕಟ್ಟೆಯನು ಕಟ್ಟಿ ನೀರೆರೆದವರು ಯಾರು

ಹುಟ್ಟಿಸಿದ ದೇವನು ತಾ ಹೊಣೆಗಾರನಾಗಿರಲು

ಗಟ್ಯಾಗಿ ಸಲಹುವನು ಸಂಶಯವಿಲ್ಲ//


ಕಲ್ಲಿನೊಳ ಹುಟ್ಟಿರುವ ಕ್ರಿಮಿ ಕೀಟಗಳಿಗೆ

ಅಲ್ಲೇ ಆಹಾರವನ್ನು ತಂದಿತ್ತವರು ಯಾರು

ಪುಲ್ಲಲೋಕಾನ ನಮ್ಮ ನೆಲಯಾದಿ ಕೇಶವನು

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ//

No comments:

Post a Comment