ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಗಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು
ಪರರ ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ ಬೆರಳ ಎಣಿಸುತಿಹರ ಕಂಡು
ಪತಿಯಸೇವೆ ಬಿಟ್ಟು ಪರ ಪತಿಯ ಕೂಡಿ ಸರಸವಾಡೆ
ಸತತ ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು
ಕಾಮ ಕ್ರೋಧ ಮನದೊಳಿಟ್ಟು ತಾನು ವಿಷಯ ಲಂಪಟಾಗಿ
ಸ್ವಾಮಿ ಪುರಂದರ ವಿಠಲನ ನಾಮ ನೆನೆಯದವರ ಕಂಡು ।।
No comments:
Post a Comment