Monday, February 10, 2014

ನರಸಿಂಹನ ಪಾದ

ನರಸಿಂಹನ ಪಾದ ಭಜನೆಯ ಮಾಡೋ ಪ।

ನರಸಿಂಹನ ಪಾದ ಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ।। ।।

ತರಳನ ಮೊರೆಕೇಳಿ ತ್ವರಿತದಿಂದಲಿ ಬಂದು
ದುರುಳನ ಕರುಳ ತನ್ನ ಕೊರಳಲಿ ಧರಿಸಿದ ।।೧।।

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ।
ವರಕಂಬದಿಂದ ಬಂದ ವೈಕುಂಠಪತಿ ನಮ್ಮ ।।೨।।

ಹರಿವಿರಿ೦ಚಾದ್ಯರು ಕರವೆತ್ತಿ ಮುಗಿಯಲು
ಪರಮಶಾಂತನಾದ ಪುರಂದರವಿಠಲ ।।೩।।

No comments:

Post a Comment