Tuesday, February 18, 2014

ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ

ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ
ಕಣ್ಣು ಕೈಕಾಲು ಕಿವಿ ನಾಲಿಗೆ ಇರಲ್ಕೆ ಮಣ್ಣು ಮುಕ್ಕಿ ಹುಚ್ಚರಾಗುವರೆ ।।

ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ ಉಣ್ಣದೆ
ಉಪವಾಸ ಇರುವರೆ ಖೋಡಿ
ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ ।।

ದಾಳಿ ಬಾರದ ಮುನ್ನ ಧರ್ಮವ ಗಳಿಸಿರೋ
ಹಾಲು ಸಂಸಾರ ಸುಳಿಗೆ ಸಿಕ್ಕಲು ಬೇಡಿ
ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ತಂತ್ರರು ಕಾಯುವರೆ ।।

ಇನ್ನಾದರೂ ಏಕೋಭಾವದಿ ಭಜಿಸಿರೊ
ಚಿನ್ನ ಶ್ರೀ ಪುರಂದರವಿಠಲರಾಯನ ।।

No comments:

Post a Comment