Wednesday, February 12, 2014

ಭಳಿರೆ ಭಳಿರೆ ನಾರಸಿಂಹ

ಭಳಿರೆ ಭಳಿರೆ ನಾರಸಿಂಹ

ಭಳಿರೆ ಭಳಿರೆ ನಾರಸಿಂಹ ಮಹಾಸಿಂಹ
ಮಲಮಲಾ ಮಲತವರ ವೈರಿ ಉರಿ ಮಾರೀ ಪ।

ನಗಾ ನಗಗಳಲ್ಲಾಡೆ ಚತುರ್ದಶ
ಜಗಜಗಾ ಜಗವೆಲ್ಲ ಕಂಪಿಸಿ ಕೆಂಪಾಗೆ
ಹಗೆ ಹಗೇ ಹಗೆ ಬಲವ ದೆಸೆಗೆಡಸಿ ರೋಷಕಿಡಿ
ಉಗು ಉಗು ಉಗುಳುತ್ತ ಬಂದ ನರಸಿಂಹ ।।೧।।

ಬಿಗಿ ಬಿಗಿ ಬಿಗಿದೂ ಹುಬ್ಬು ಗಂಟನೆ ಹಾಕಿ
ಹೊಗೆ ಹೊಗೆ ಹೊಗೆಸುತ್ತಿ ಸರ್ವರಂಜೆ
ನೆಗೆ ನೆಗೆ ನೆಗೆ ನೆಗೆದು ಕುಪ್ಪಳಿಸಿ ಅಸುರನ್ನ
ಮಗು ಮಗು ಮಗು ಬೇಡಿಕೊಂಡ ನರಸಿಂಹ ।।೨।।

ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ
ಬಗೆ ಬಗೆ ಬಗೆ ಬಗೆದು ರಕುತವನ್ನೂ
ಉಗಿ ಉಗಿ ಉಗಿ ಉಗಿದು ಚೆಲ್ಲಿ ಕೊರಳಿಗೆ ಕರುಳ
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ ।।೩।।

ಝಗ ಝಗ ಝಗ ಝಗದೊಳಗೆ ಪ್ರಣತಾರ್ತಿಹರನೆಂದು
ಝಗ ಝಗ ಝಗ ಝಗಿಪ ಮುಕುಟ ತೊಗೆ
ನಗು ನಗು ನಗು ನಗುತ ಸುರರು ಗಗನದಿ ನೆರೆದು
ಮಿಗಿ ಮಿಗಿ ಮಿಗಿ ಮಿಗಿಲೆನೆ ನಾರಸಿಂಹ ।।೪।।

ಒಂದೊಂದೊಂದೊಂದು ಮುನಿಗಳಿಗೆ ಒಲಿದು
ಅಂದಂದಂದ೦ದಗಾಯುತ ಒಲಿದು
ಅಂದಂದವಕಾಶ ಚೋಳ೦ಗಿರೀ
ಮಂದಿರನೆ ವಿಜಯ ವಿಠಲ ನಾರಸಿಂಹ ।।೫।।

No comments:

Post a Comment