ನಾ ನಿನ್ನೊಳನ್ಯ ಬೇಡುವುದಿಲ್ಲ
ಎನ್ನ ಹೃದಯ ಕಮಲದೊಳು ನಿಂದಿರು ಹರಿಯೇ ।।
ಕರ್ಣ ಗೀತಂಗಳ ಕೇಳಲಿ ನಿನ್ನ ನಿರ್ಮಾಲ್ಯ ನಾಸಿಕವಾಘ್ರಾಣಿಸಲಿ ಹರಿಯೇ
ನಾಲಿಗೆ ನಿನ್ನ ಕೊಂಡಾಡಲಿ ಎನ್ನ ಕರಗಳೆರೆಡು ನಿನ್ನನರ್ಚಿಸಲಿ ಹರಿಯೇ
ಚರಣ ತೀರ್ಥಯಾತ್ರೆ ಮಾಡಲಿ ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೇ
ಬುದ್ಧಿ ನಿನ್ನೊಳು ಬೆರತೋಗಲಿ ಎನ್ನ ಚಿತ್ತ ನಿನ್ನೊಳು ಸ್ಥಿರವಾಗಿರಲಿ ಹರಿಯೇ
ಭಕ್ತ ಜನರ ಸಂಗವಾಗಲಿ ಶ್ರೀ ಪುರಂದರವಿಠಲನೆ
ಇಷ್ಟು ದಯಮಾಡು ಹರಿಯೇ ।।
No comments:
Post a Comment