Wednesday, February 19, 2014

ಸಿಂಹರೂಪನಾದ ಶ್ರೀಹರಿ ನಾಮಗಿರೀಶನು

ಸಿಂಹರೂಪನಾದ ಶ್ರೀಹರಿ ನಾಮಗಿರೀಶನು ಪ।

ಒಮ್ಮನದಿಂದ ನಿಮ್ಮನು ಭಜಿಸಲು
ಸಮ್ಮತಿಯಿಂದಲಿ ಕಾಯ್ವೆನೆಂಬ ಶ್ರೀಹರಿ ।। ।।

ತರುಳನು ಕರೆಯೆ ಸ್ತಂಭವು ಬಿರಿಯೆ
ತುಂಬು ಉಗ್ರವ ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರುಳನು ಸಲಹಿದ ಶ್ರೀನರಸಿಂಹನು ।।೧।।

ಭಕ್ತರೆಲ್ಲ ಕೂಡಿ ಬಹುವಾರ ಪಾಡಿ
ಪರಮ ಶಾಂತವನು ಬೇಡಿದರು
ಕರೆತಂದು ಸಿರಿಯಾ ತೊಡೆಯೊಳು ಕಳಿಸಲು
ಪರಮ ಹರುಷವನು ಹೊಂದಿದ ಶ್ರೀಹರಿ ।।೨।।

ಜಯಜಯ ಜಯವೆಂದು ಹೂವನು ತಂದು
ಹರಿ ಹರಿ ಹರಿ ಎಂದು ಸುರರೆಲ್ಲ ಸ್ತುತಿಸಿ
ಭಯ ನಿವಾರಣಾ ಭಾಗ್ಯ ಸ್ವರೂಪನು
ಪರಮಪುರುಷ ಶ್ರೀ ಪುರಂದರವಿಠಲನು ।।೩।।

No comments:

Post a Comment