ರಾಗ : ಮಧ್ಯಮಾವತಿ
ತಾಳ : ಆಟತಾಳ
ರುದ್ರಾಂತರ್ಗತ ನಾರಸಿಂಹ ಪಾಹಿ
ರುದ್ರಾಂತರ್ಗತ ನಾರಸಿಂಹ ಪಾಹಿ
ಭದ್ರಮೂರುತಿ ನಿರ್ಗತಾಂಹ್ವ । ಪ ।
ಹೃದ್ರೋಗಕಳೆದು ಜ್ಞಾನಾರ್ದ್ರಸ್ವಾಂತನ ಮಾಡು
ಪದ್ರಸಾಮಗಘ ಸಮುದ್ರ ದಾಟಿಸಿ ಬೇಗ । ಅ ಪ ।
ಏಸೇಸು ಕಲ್ಪಗಳಲ್ಲಿ ನಿನ್ನ ದಾಸನಾನೆಂಬುದ ಬಲ್ಲಿ
ಈಶ ನೀನೆಂಬುದು ಲೇಶವರಿಯೆ
ಕ್ಲೇಶನಾಶನ ಪ್ರಭುವೆ ವಾರಾರಿಜೆವಲ್ಲಭ
ವಾಸವಾನುಜ ವನಧಿಶಯನ ಮಹೇಶವಂದಿತವರದ
ಹೇ ಕರುಣಾ ಸಮುದ್ರ ಕರಾಳವದನನೆ
ನೀ ಸಲಹದಿರೆ ಕಾಣೆ ಕಾವರ ।। ೧ ।।
ಹೇಮಕಶ್ಯಪು ತನ್ನ ಸುತನ ನೋಯಿಸೆ
ಶ್ರೀಮನೋಹರನೆ ಆನತನ್ನ ವ್ಯೋಮ ಪರ್ವತ
ಅಂಬುಧಿಧಾಮದೊಳುಳುಹಿ ಭೂಮಮುನಿಗಣ
ಸ್ತೋಮವಂದಿತಪಾದ ಸಾಮಜೇಂದ್ರನ ಸರಸಿಯೊಳು
ಸುತ್ರಾಮನಂದನನಾ ರಣದಿ ಕುರು ಭೂಮಿಪತಿ
ಸಭೆಯೊಳಗೆ ದ್ರೌಪದಿಯ ಆ ಮಹಾತ್ಮರ ಕಾಯ್ದ ಕರುಣಿ ।। ೨ ।।
ವೇದಗಮ್ಯ ವೇದವ್ಯಾಸ ಕಪಿಲ ಯಾದವೇಶ ಮಹಿದಾಸ
ಶ್ರೀದ ಶ್ರೀಷ ಅನ್ನಾದಿ ವಿಶ್ವಧನ್ವಂತ್ರಿ
ಮೇಧಾವಿಪತಿ ವಾಮನಾದಿರೂಪಕ ವಿಷ್ಣು
ಕಾದುಕೊ ನೀನವರ ಮನದ ವಿಷಾದ
ರೋಗಂಗಳನು ಅಳಿದು ಮಹದಾದಿದೇವ
ಜಗನ್ನಾಥವಿಠಲ ಆದರದಿ ಪ್ರಹ್ಲಾದ ವರದ ।। ೩ ।।
No comments:
Post a Comment