ದಾಸನ ಮಾಡಿಕೋ ಎನ್ನ ಸ್ವಾಮಿ
ಸಾಸಿರ ನಾಮದ ವೆಂಕಟ ರಮಣಾ ।।
ದುರ್ಬುದ್ಧಿಗಳನ್ನೆಲ್ಲ ಬಿಡಿಸೋ
ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೋ
ಚರಣ ಸೇವೆ ಎನಗೆ ಕೊಡಿಸೋ
ಅಭಯಕರ ಪುಷ್ಪವೆನ್ನಯ ಶಿರದಲಿ ಮೂಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ
ನಡಿಗೆರಗುವೆನಯ್ಯಾ ಅನುದಿನ ಪಾಡಿ
ಕಡೆಗಣ್ಣಲೇಕೆನ್ನ ನೋಡಿಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।
ಮೊರೆಹೊಕ್ಕವರ ಕಾವ ಬಿರುದು
ಎನ್ನ ಮರೆಯದೆ ರಕ್ಷಣೆಮಾಡಯ್ಯ ಪೊರೆದು
ದುರಿತಗಳೆಲ್ಲವ ತರಿದು
ಸಿರಿ ಪುರಂದರವಿಠಲ ಎನ್ನನು ಪೊರೆದು ।।೩।।
No comments:
Post a Comment