ರಾಗ : ಬಿಲಹರಿ
ತಾಳ : ಆಟತಾಳ
ನರಸಿಂಹ ಮಂತ್ರ ಒಂದಿರಲು ಸಾಕು
ನರಸಿಂಹ ಮಂತ್ರ ಒಂದಿರಲು ಸಾಕು
ದುರಿತಕೋಟಿಗಳ ಸಂಹರಿಸಿ ಭಾಗ್ಯವನೀವ । ಪ ।
ಹಸುಳೆ ಪ್ರಹ್ಲಾದನ ತಲೆಗಾಯ್ದದೀ ಮಂತ್ರ
ಅಸುರನೊಡಲ ಬಗೆದ ದಿವ್ಯ ಮಂತ್ರ
ವಸುಧೆಯೊಳು ದಾನವರ ಅಸುವ ಸೆಳೆವ ಮಂತ್ರ
ಪಶುಪತಿಗೆ ಪ್ರಿಯವಾದ ಮೂಲಮಂತ್ರ ।। ೧ ।।
ದಿಟ್ಟ ಧೃವರಾಯಗೆ ಪಟ್ಟಗಟ್ಟಿದ ಮಂತ್ರ
ಸೃಷ್ಟಿಯೊಳು ವಿಭೀಷಣನ ಪೊರೆದ ಮಂತ್ರ
ತುಟ್ಟ ತುದಿಯೊಳು ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಪರಿಗಿದು ದೃಷ್ಟಮಂತ್ರ ।। ೨ ।।
ಹಿಂಡುಭೂತವ ಕಡುದು ತುಂಡು ಮಾಡುವ ಮಂತ್ರ
ಕೊಂಡಾಡಿಲೋಕಕದ್ದುಂಡ ಮಂತ್ರ
ಗಂಡುಗಲಿ ಪ್ರಚಂಡ ಹಿಂಡು ದಾನವರುಗಳ
ಗಂಡ ಪುರಂದರವಿಠಲನ ಮಹಾಮಂತ್ರ ।। ೩ ।।
No comments:
Post a Comment