ರಾಗ : ನಾಟಿ
ತಾಳ : ಮಿಶ್ರಛಾಪುತಾಳ
ವಾದಿರಾಜರ ಕೃತಿ
ಏನ ಬಣ್ಣಿಪೆನಮ್ಮ | ಪ |
ಬಣ್ಣಿಪೆ ನಮ್ಮಯ್ಯ ಗುರುರಾಯರ | ಅ ಪ |
ಮಧ್ವಸರೋವರ ತೀರದ ಮುದ್ದುಕೃಷ್ಣನ
ಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ
| ೧ |
ಭವಬಂಧ ಮಾಯಿಗಳ ಕಾಲಲೊದ್ದು ಮೂಲಿಲ್ಹಾಕಿ
ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ
| ೨ |
ಸಿರಿ ಹಯವದನ ಚರಣಕಮಲವನ್ನು
ನಿರುತವಾಗಿ ಸೇವಿಸುವ ಅಚ್ಚಿನ್ನ ನಿಜದಾಸರ | ೩ |
No comments:
Post a Comment