ರಾಗ : ಪಂತುವರಾಳಿ
ತಾಳ : ತಿಶ್ರಛಾಪು
ವಾದಿರಾಜರ ಕೃತಿ
ನೆರೆನಂಬಿ ಪಡೆಯಿರೋ ಹಿತವ ನಮ್ಮ
ಗುರುವಾದ ಮಧ್ವಮುನಿ ಸಮ್ಮತವ | ಪ |
ತ್ರೇತೆಯೊಳಂಜನಾ ತನಯನಾಗಿ
ಸೀತಾರಮಣ ರಘುನಾಥಗೆ ಪ್ರಿಯ
ದೂತತನದಿ ಖಳತತಿಯ ಕೊಂದು
ಖ್ಯಾತಿ ಪಡೆದ ಹನುಮನಾದ ಯತಿಯ | ೧ |
ದ್ವಾಪರದಲಿ ಭೀಮನೆನಿಸಿ ಪಾಂಡು
ಭೂಪನರಸಿ ಕುಂತಿದೇವಿಯೊಳುದಿಸಿ
ಶ್ರೀಪತಿಗರ್ಥಿಯ ಸಲಿಸಿ ನೃಪಾನೃಪರೆಲ್ಲರ
ಕೊಂದ ಮಹಿಮನ್ನ ಭಜಿಸಿ | ೨ |
ಕಲಿಯುಗದಲ್ಲಿ ಯತಿಯಾಗಿ ಈ
ಇಳೆಯ ದುಶ್ಶ್ಯಾಸ್ತ್ರವ ಜಾರಿದ ವಿರಾಗಿ
ಕುಲಗುರು ಶ್ರೀ ಮಧ್ವಯೋಗಿ ನಮ್ಮ
ಚೆಲುವ ಹಯವದನ ಭಂಟನೆಂದು ಬಾಗಿ | ೩ |
No comments:
Post a Comment