ರಾಗ : ಕಮಾಚ್
ತಾಳ : ಆದಿತಾಳ
ಮಹಿಪತಿದಾಸರ ಕೃತಿ.
ಗುರು ಮಧ್ವಮುನಿರನ್ನ ಮೂರು ಪರಿಯದೋರಿದೆ ನಿನ್ನ
ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು
ನಿನ್ನ
ಸ್ಮರಣೆಯಲಿಹೆ ರಾಮನ್ನ ಪರಮಪಾವನ್ನ | ೧ |
ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ
ಪ್ರಥಮಲ್ಯಾದೆ ಹನುಮ ದ್ವಿತಿಯಲ್ಯಾದೆ ಭೀಮ
ತೃತಿಯಲ್ಲಿ ಪೂರ್ಣ ಪ್ರಾಜ್ಞನೆನಿಸಿದೆ ನಿಸ್ಸೀಮ
| ೨ |
ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ
ಶ್ರೀಹರಿ ಸಾನ್ನಿಧ್ಯ ಪೂರ್ಣ ಇಹ ಸಕಲನಿಪುಣ
ಮಹಿಪತಿ ಮುಖ್ಯಪ್ರಾಣ ಸ್ವಹಿತ ಸಾಧನ | ೩ |
No comments:
Post a Comment