ಮಾರುತಿ ನಿನ್ನ ನಿರುತಡಿ ಭಜಿಪೆ
ತ್ವರಿತದಿ ಹರಿ ಸರ್ವೋತ್ತಮನೆಂಬೋ
ಸರಸವಿಜ್ಞಾನವ ಸರಿ ಇಲ್ಲದೆ
ಇತ್ತು
ಪರಿಪಾಲಿಸು ಎಂದು ಶಿರಸದಿ ನಮಿಪೆ
ಸರಿಯಾರಯ್ಯ ನಿನಗೆ
ಸರಸಿಜಾಂಡದೊಳು
ಅರಸಿ ನೋಡಲು ಆರಾರು ಇಲ್ಲವೋ
ಕಾರುಣ್ಯಸಾಗರ ಕರುಣಿಸಿ ನೀ ಎನ್ನ
ಹರಿ ತಾ ಕರುಣಿಪೆನೆಂದು ಅರಿತು
ನಿನ್ನಯ ದಿವ್ಯಚರಣ
ಸೇರಿದೆನಯ್ಯ ಸರಿ ಬಂದದ್ದು ಮಾಡೋ
ಹರಿ ಕುಲವರಿಯನೆ ಪರಿಪರಿ ಜನರನ್ನ
ಪಾಲಿಸಿ ಎನ್ನನು
ದೂರದಿ ಇಟ್ಟರೆ ದೊರೆತನವೇನಯ್ಯ
ಸಾರುವೆ ಸಾರುವೆ ಸರಸಿಜನಾಭನ
ಸುತನೆ
ಆರು ಮೂರೆರೆಡೊ೦ದು ಸಾವಿರ
ಮೂರೆರೆಡು ಶತ ಶ್ವಾಸ ಜಪಗಳನು
ಮೂರು ಜೀವರಲ್ಲಿ ನೀರಜ್ಜಕಲ್ಪ
ಪರಿಯಂತರ ಮಾಡಿ ಅವರವರ ಗತಿಯ
ಮರೆಯದೆ ನೀಡುವೆ ಗಿರಿಶತನುಪಾದ
ಗುರು ಜಗನ್ನಾಥವಿಠಲನ್ನ ಅರಿವಂತೆ
ಮಾಡೋ ಧೀರ॥
No comments:
Post a Comment