ರಾಗ : ಸೌರಾಷ್ಟ್ರ
ತಾಳ : ಆದಿತಾಳ
ಆನಂದ ತೀರ್ಥರೆಂಬೋ ಅರ್ಥಿಯ ಪೆಸರುಳ್ಳ ಗುರು
ಮಧ್ವಮುನಿರಾಯ |ಪ|
ಏನೆಂಬೆ ನಾನಿಮ್ಮ ಕರುಣಕ್ಕೆ ಎಣೆಗಾಣೆ ಗುರು
ಮಧ್ವಮುನಿರಾಯ | ಅ ಪ |
ಬೇಸರದೆ ಸರ್ವರೊಳು ಶ್ವಾಸಜಪಂಗಳ ಮಾಡಿ ಗುರು
ಮಧ್ವಮುನಿರಾಯ |
ಶ್ರೀಶಗರ್ಪಿಸುತ ನಿನ್ನ ದಾಸರನು ಸಲಹಿದಿ ಗುರು
ಮಧ್ವಮುನಿರಾಯ | ೧ |
ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರು
ಮಧ್ವಮುನಿರಾಯ |
ಅಂದವಾದ ಪದವಿತ್ತಾನಂದದಿಂದದ ಪೊರೆದೆಯೊ ಗುರು
ಮಧ್ವಮುನಿರಾಯ | ೨ |
ಕುಂತಿಯ ಕುಮಾರನಾಗಿ ಹೊಂತ ಕೌರವರ ಕೊಂದೆ ಗುರು
ಮಧ್ವಮುನಿರಾಯ |
ಅನ್ನತ ಪುಣ್ಯವ ಗಳಿಸಿ ಶ್ರೀಕಾಂತನಿಗರ್ಪಿಸಿದೆ
ಗುರು ಮಧ್ವಮುನಿರಾಯ | ೩ |
ಅದ್ವೈತರನು ಕಾದು ಗೆದ್ದು ನಿನ್ನ ಭಕ್ತರಿಗೆ
ಗುರು ಮಧ್ವಮುನಿರಾಯ |
ಶುದ್ಧ ತಾತ್ಪರ್ಯ ವಾಕ್ಯ ಪದ್ಧತಿಯ ತಿಳಿಸಿದೆ
ಗುರು ಮಧ್ವಮುನಿರಾಯ | ೪ |
ಗುರುಪ್ರಾಣೇಶವಿಠಲ ಪರನೆಂದು ಡಂಗುರವ ಗುರು
ಮಧ್ವಮುನಿರಾಯ |
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದಿ ಗುರು
ಮಧ್ವಮುನಿರಾಯ । ೫ ।
No comments:
Post a Comment