Monday, May 20, 2013

ಕೃಷ್ಣ ನೀ ಬೇಗನೇ ಬಾರೋ


ಕೃಷ್ಣ ನೀ ಬೇಗನೇ ಬಾರೋ
ಬೇಗನೆ ಬಾರೋ ಮುಖವನ್ನು ತೋರೋ||

ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ|| 

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ|| 

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಶಿದ ಶ್ರೀ ಗಂಧ ಮೈಯೊಳು ಗಮ್ಮ|| 

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ||

No comments:

Post a Comment