Sunday, May 5, 2013

ಕಾರುಣ್ಯ ಮೂರುತಿಯೆ ಕಂಗಳು ಮೂರುಳ್ಳ ದೊರೆಯೇ



ಕಾರುಣ್ಯ ಮೂರುತಿಯೆ ಕಂಗಳು ಮೂರುಳ್ಳ ದೊರೆಯೇ////
ಧಾರಿಣಿಯೊಳಗೆ ನಿನಗೆ ಎಣೆಯೇ ಗುರುದೇವ ಶಿಖಾಮಣಿಯೇ//ಅಪ//

ಗುಹಾಸುರ ಮರ್ದನನೆ ಖಗವೃಷ ವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವನೆ //

ತ್ರಿಪುರಾವಳಿ ಸಂಗರನೆ ತ್ರೈಲೋಕ್ಯ ಪಾವನನೆ
ಅಪಾರ ಮಹಿಮನೆ ಪ್ರಸನ್ನ ಶ್ರೀ ಹರಿಹರನೆ //

ತುಂಗಾ ಭದ್ರದಡಿಯ ತಾಳಿಪ್ಪೆ ಗಂಗೆಯ ಜಡೆಯ
ಪುರಂದರ ವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ //

No comments:

Post a Comment