ಸ್ಮರಿಸೊ ಸರ್ವದ ಹರಿಯ ||
ಸುರವರ ದೊರೆಯ ಕರುಣಾನಿಧಿಯ ||
ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||
ಸುರವರ ದೊರೆಯ ಕರುಣಾನಿಧಿಯ ||
ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||
ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ ||
ಪರವಾಸುದೇವನ ಪ್ರಾಣದ ಪ್ರಿಯನ ||
ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ ||
ಲಕ್ಷ್ಮೀರಮಣನ ಪುರಂದರವಿಠಲನ ||
No comments:
Post a Comment