ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ ||ಪ||
ಸ್ವಾಮಿಯ ನಾಮವ ಮರೆಯದಿರೋ ||ಪ||
ತುಂಬಿದ ಪಟ್ಟಣಕೊಂಭತ್ತು ಬಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ
ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ
ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ//
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ//
No comments:
Post a Comment