ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ ಯಾರಿಗೆ ವಧುವಾಗುವೆ ನೀನು ||
ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ ||
ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕೃಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ ||
ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||
ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ ||
ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಠಲರಾಯನಿಗೋ||
ಗೆಳತಿ ಹೇಳು ಉಡುಪಿ ಶ್ರೀ ಕೃಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ ||
ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ ||
ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ ||
ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಠಲರಾಯನಿಗೋ||
No comments:
Post a Comment