Thursday, May 2, 2013

ಕಂಡೆ ಕರುಣಾನಿಧಿಯ

ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ////
ರುಂಡಮಾಲೆ ಸಿರಿಯ ನೊಸಲೊಳು ಕೆಂಡ ಕಣ್ಣಿನ ಬಗೆಯ ಹರನ//ಅಪ//
 
ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ 
ಮುಪ್ಪುರ ಗೆಲಿದವನ ಮುನಿಸುತ ಸರ್ಪ ಭೂಷಣ ಶಿವನ ಹರನ//
 
ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನ 
ಪಶುಪತಿಯೆನಿಸುವವನ ವಸುಧೆಲಿ ಶಶಿಶೇಖರ ಶಿವನ ಹರನ//
 
ಗಜ ಚರ್ಮಾಂಬರನ ಗೌರಿವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ//
 
ಕಾಮಿತ ಫಲವೀವನ ಭಕುತರ ಪ್ರೇಮದಿಂ ಸಲಹುವನ 
ರಾಮ ನಾಮ ಸ್ಮರಣ ರತಿಪತಿ ಕಾಮನ ಸಂಹಾರನ ಶಿವನ//
ಧರೆಗೆ ದಕ್ಷಿಣ ಕಾಶಿ ಎಂದೆನಿಸುವ ವರ ಪಂಪವಾಸಿ 
ತಾರಕ ಉಪದೇಶಿ ಪುರಂದರ ವಿಠಲ ಭಕ್ತರ ಪೋಷಿ ಹರನ//

No comments:

Post a Comment